ಮದಪುಸಿ ರಾಘವನ್ ಶ್ರೀನಿವಾಸ ಪ್ರಸಾದ್(ಎಮ್.ಆರ್. ಶ್ರೀನಿವಾಸ ಪ್ರಸಾದ್) ಇವರು ೧೯೫೯ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಜನಿಸಿದರು. ಇವರು ಬಬ್ಬ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲರ್ ಆಗಿದ್ದುರು. ೧೯೮೩-೧೯೮೮ರಲ್ಲಿ ವಿಲ್ಸ್ ಟ್ರೋಫಿ ಮತ್ತು ೧೯೮೪-೮೫ರಲ್ಲಿ ದೇವಧರ್ ಟ್ರೋಫಿಯನ್ನು ಇವರು ಕರ್ನಾಟಕಕ್ಕಾಗಿ ಆಡಿದ್ದಾರೆ. ಅವರು ಜಿಂಬಾಬ್ವೆಯಲ್ಲಿ ಯುವ ಭಾರತವನ್ನು ಪ್ರತಿನಿಧಿಸಿದರು (೧೯೮೩/೮೪). ೧೯೭೯/೮೦ ರಿಂದ ೧೯೮೭/೮೮ರ ಪ್ರಥಮ ದರ್ಜೆಯ ಅವಧಿಯಲ್ಲಿ ಅವರು ೫೩ ಪಂದ್ಯಗಳಲ್ಲಿ ೩೦೩೧ ರನ್‍ಗಳನ್ನು ಗಳಿಸಿದರು. == ಕ್ರಿಕೆಟ್ ಹೊರಗಿನ ವೃತ್ತಿ == ಎಂ.ಆರ್.ಶ್ರೀನಿವಾಸ್ ಪ್ರಸಾದ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿದ್ದು, ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ. ಅವರು ವಿವಿಧ ಉದ್ಯಮಗಳಲ್ಲಿ ಅನೇಕ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಇವರು ಪ್ರಸ್ತುತ ಬೆಂಗಳೂರಿನ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್‌ನ ಸಿಇಒ ಆಗಿದ್ದಾರೆ. ಮ್ಯಾನೇಜರ್ - ಅಲ್ಕಾಟೆಲ್ ಬಿಸಿನೆಸ್ ಸಿಸ್ಟಮ್ಸ್, ಪ್ಯಾರಿಸ್. ಜನರಲ್ ಮ್ಯಾನೇಜರ್, ಮುಖ್ಯಸ್ಥರು – ಸೋನಿ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರ, ಬೆಂಗಳೂರು. ಉಪಾಧ್ಯಕ್ಷ – ಐಟಿ – ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್, ಬೆಂಗಳೂರು. ಸಿಇಒ @ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್, ಬೆಂಗಳೂರು. ಬೋರ್ಡ್ ಆಫ್ ಡೈರೆಕ್ಟರ್ಸ್ ಫಿಲಿಪ್ಸ್ ಹೋಮ್‌ಕೋ, ಭಾರತ. ಅಧ್ಯಕ್ಷರು, ಫಿಲಿಪ್ಸ್ ಇಂಡಿಯಾ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಟ್ರಸ್ಟ್. ಉದ್ಯಮ ಸಲಹಾ ಮಂಡಳಿಯ ಸದಸ್ಯರು, ಬೆಂಗಳೂರು (ಪ್ರಸ್ತುತ) ಸಿಐಐ ರಾಷ್ಟ್ರೀಯ ತಂತ್ರಜ್ಞಾನ ಸಮಿತಿ ಮತ್ತು ಆರ್ & ಡಿ (ಪ್ರಸ್ತುತ) === ರಾಜಕೀಯ ಪಕ್ಷ ಮತ್ತು ಸಚಿವಾಲಯ === ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲದವರು. ನಂತರ ಅವರು ಜನತಾದಳ - ಯುನೈಟೆಡ್ ಸೇರಿದರು. ಇವರು ೨೦೧೩ ರಲ್ಲಿ ಕಾಂಗ್ರೆಸ್‍ನ ಮುಖಾಂತರ ನಂಜಂಗುಡಿನ ಶಾಸಕರಾಗಿ ಆಯ್ಕೆಯಾದರು ಮತ್ತು ೨೦೧೭ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ್ದರು. ಇವರು ಅಟಲ್ ಬಿಹಾರಿ ವಾಜಪೇಯಿ ಅವರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು. ನವೆಂಬರ್ ೨೦೧೦ ರಿಂದ ನವೆಂಬರ್ ೨೦೧೩ ರವರೆಗೆ ಕೆಎಸ್ಸಿಎ ವ್ಯವಸ್ಥಾಪನಾ ಸಮಿತಿಯ ಭಾಗಿಯಾಗಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==